
6th August 2025
ಬೆಳಗಾವಿ: ಸರ್ವಲೋಕಾ ಸೇವಾ ಫೌಂಡೇಶನ್ ಮಾಡುತ್ತಿರುವ ಸಾಮಾಜಿಕ ಸೇವೆಯನ್ನು ಗಮನಿಸಿ ಬಸವನ ಕುಡಚಿಯ ರೇವಣ ಸಿದ್ಧೇಶ್ವರ ಜ್ಯೋತಿಷ್ಯಾಲಯದ ಸಂಸ್ಥಾಪಕ, ಅಧ್ಯಕ್ಷ ಶ್ರೀ ನೀಲಕಂಠಯ್ಯ ರಾಚಯ್ಯ ಹಿರೇಮಠ ಶಾಸ್ತ್ರೀ ಅವರು ಸೋಮವಾರ ಅಂಬ್ಯುಲೆನ್ಸ್ ದೇಣಿಯಾಗಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ ಶ್ರೀ ನೀಲಕಂಠಯ್ಯ ರಾಚಯ್ಯ ಹಿರೇಮಠ ಶಾಸ್ತ್ರೀ ಅವರು, ವೀರೇಶ ಬಸಯ್ಯ ಹಿರೇಮಠ ಅವರು ಸರ್ವಲೋಕಾ ಸೇವಾ ಫೌಂಡೇಶನ್ ನಿಂದ ಸಾಕಷ್ಟು ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದಾರೆ. ಪವಿತ್ರ ಹಿಂದೂ ದೇವತೆಯ ಮುಕ್ಕಾದ ಫೋಟೋಗಳನ್ನು ಸಂಗ್ರಹಿಸಿ ವಿಧಿ ವಿಧಾನದ ಮೂಲಕ ವಿಸರ್ಜನೆ ಮಾಡುವ ಅವರು ಎಲ್ಲ ಕಡೆ ಈಗ ಜನಪ್ರಿಯತೆ ಪಡೆದಿದ್ದಾರೆ ಎಂದರು.
ವೀರೇಶ ಬಸಯ್ಯ ಅವರು ನಿರಂತರವಾಗಿ ಕಾಯಕ ಮಾಡುವುದರ ಮೂಲಕ ಸಮಾಜ ಸೇವೆಯ ಜೊತೆಗೆ ಅಪಘಾತದಲ್ಲಿ ತೊಂದರೆಯಾದವರಿಗೆ ಸಲಕರಣೆ ನೀಡುವುದನ್ನು ಮಾಡುತ್ತಿದ್ದಾರೆ. ಅವರ ಸೇವೆಯನ್ನು ಕಂಡು ನಾವು ಅಂಬ್ಯುಲೆನ್ಸ್ ದೇಣಿಗೆ ನೀಡಿದ್ದೇವೆ. ಅವರಿಗೆ ಭಗವಂತ ಇನ್ನಷ್ಟು ಸಮಾಜದ ಕೆಲಸ ಮಾಡುವ ಶಕ್ತಿ ನೀಡಲಿ ಎಂದರು.
ಪ್ರಶಾಂತ ಗೋಡ್ಕೆ ಮಾತನಾಡಿ, ಸರ್ವಲೋಕಾ ಸೇವಾ ಫೌಂಡೇಶನ್ ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ಅವರು ಸಾಮಾಜಿಕ ಕಾರ್ಯ ಮಾಡುವುದರ ಮೂಲಕ ಜನರಿಗೆ ಮಾದರಿಯಾಗಿದ್ದಾರೆ. ಅವರಿಗೆ ರೇವಣ ಸಿದ್ಧೇಶ್ವರ ಜ್ಯೋತಿಷ್ಯಾಲಯದ ಸಂಸ್ಥಾಪಕ, ಅಧ್ಯಕ್ಷ ಶ್ರೀ ನೀಲಕಂಠಯ್ಯ ರಾಚಯ್ಯ ಹಿರೇಮಠ ಶಾಸ್ತ್ರೀ ಅವರು ಅಂಬ್ಯುಲೆನ್ಸ್ ದೇಣಿಗೆ ನೀಡಿದ್ದು ಸಂತಸ ತಂದಿದೆ ಎಂದರು.
ಸರ್ವಲೋಕಾ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ಅವರು ಮಾತನಾಡಿ, ರೇವಣ ಸಿದ್ಧೇಶ್ವರ ಜ್ಯೋತಿಷ್ಯಾಲಯದ ಸಂಸ್ಥಾಪಕ, ಅಧ್ಯಕ್ಷ ಶ್ರೀ ನೀಲಕಂಠಯ್ಯ ರಾಚಯ್ಯ ಹಿರೇಮಠ ಶಾಸ್ತ್ರೀ ಅವರು ನಮ್ಮ ಫೌಂಡೇಶನ್ ಗೆ ನಮ್ಮ ಸೇವೆ ಗಮನಿಸಿ ಅಂಬ್ಯುಲೆನ್ಸ್ ದೇಣಿಗೆ ನೀಡಿರುವುದು ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಇನಷ್ಟು ಹೆಚ್ಚಿನ ಸಮಾಜ ಸೇವೆ ಮಾಡಲು ಪ್ರೇರೆಪಣೆ ಸಿಕ್ಕಿದೆ ಎಂದರು.
ಕೊಪ್ಪಳ ಖಾದಿ ಉತ್ಸವ ಮೂರು ದಿನದಲ್ಲಿ ಏಳು ಸಾವಿರ ಜನ ಭೇಟಿ:21.84 ಲಕ್ಷ ವಸ್ತುಗಳು ಮಾರಾಟ